ಗುರುವಿದ್ದಂತೆ ಪರರಿಗೆ ನೀಡಬಹುದೆ?
ಮನೆಯ ಆಕಳು ಉಪವಾಸ ಇರಲಾಗಿ
ಪರ್ವತಕ್ಕೆ ಸೊಪ್ಪೆಯ ಹೊರಬಹುದೆ?
ಎಂಬ ಪರವಾದಿ ನೀಕೇಳು.
ಗುರುವು ಶಿಷ್ಯಂಗೆ ಲಿಂಗವ ಕೊಟ್ಟು
ತಾನು ವ್ರತಗೇಡಿಯಾಗಿ ಹೋಗುವಲ್ಲಿ
ಪರರ ಪಾದೋದಕ ಪ್ರಸಾದದಿಂದ ಪವಿತ್ರನಾದ ಕಾರಣ,
ಪರರ ಕಂಡರೆ ತನ್ನಂತೆ ಕಾಣ್ಬುದು ಎಂದು
ಗುರುವು ಹೇಳಿದ ವಾಕ್ಯವ ಮರೆದಿರಲ್ಲ?
ಅಳಿಯ ಒಡೆಯರು, ಮಗಳು ಮುತ್ತೈದೆ,
ಮನೆದೇವರಿಗೆ ಶರಣೆಂದರೆ ಸಾಲದೆ?
ಎಂಬ ಅನಾಚಾರಿಗಳ ಮಾತು ಅದಂತಿರಲಿ.
ಜಂಗಮ ದೇವರ ಪ್ರಾಣವೆಂಬ ಭಕ್ತರು
ಲಿಂಗ ಜಂಗಮದ ಕೈಯ ಹೂವು, ಹಣ್ಣು, ಕಾಯಿ, ಪತ್ರೆ,
ಹೋಗುವ ಬರುವ ಊಳಿಗವ ಕೊಂಬಾತ ಭಕ್ತನಲ್ಲ.
ಅಲ್ಲಿ ಪೂಜೆಗೊಂಬಾತ ಜಂಗಮವಲ್ಲ
ಇವರು ನಾಯಕ ನರಕಕ್ಕೆ ಯೋಗ್ಯರಯ್ಯಾ.
ಇವರಿಬ್ಬರ ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
Transliteration Guruviddante pararige nīḍabahude?
Maneya ākaḷu upavāsa iralāgi
parvatakke soppeya horabahude?
Emba paravādi nīkēḷu.
Guruvu śiṣyaṅge liṅgava koṭṭu
tānu vratagēḍiyāgi hōguvalli
parara pādōdaka prasādadinda pavitranāda kāraṇa,
parara kaṇḍare tannante kāṇbudu endu
guruvu hēḷida vākyava marediralla?
Aḷiya oḍeyaru, magaḷu muttaide,
Manedēvarige śaraṇendare sālade?
Emba anācārigaḷa mātu adantirali.
Jaṅgama dēvara prāṇavemba bhaktaru
liṅga jaṅgamada kaiya hūvu, haṇṇu, kāyi, patre,
hōguva baruva ūḷigava kombāta bhaktanalla.
Alli pūjegombāta jaṅgamavalla
ivaru nāyaka narakakke yōgyarayyā.
Ivaribbara uriliṅgapeddigaḷarasa ollanavvā.