ಭಾಗ್ಯವುಳ್ಳ ಪುರುಷಂಗೆ ಕಾಮಧೇನು,
ಕಾಮಿಸಿದುದನೀವುದಯ್ಯಾ.
ನಿರ್ಭಾಗ್ಯ ಪುರುಂಷಗೆ ಕಾಮಧೇನು,
ತುಡುಗುಣಿಯಾಗಿ ತೋರುವುದಯ್ಯಾ.
ಸತ್ಯಪುರುಷಂಗೆ ಕಲ್ಪವೃಕ್ಷ,
ಕಲ್ಪಿಸಿದುದನೀವುದಯ್ಯಾ.
ಅಸತ್ಯಪುರುಷಂಗೆ ಕಲ್ಪವೃಕ್ಷ,
ಬೊಬ್ಬುಳಿಯಾಗಿ ತೋರುವುದಯ್ಯಾ.
ಧರ್ಮ ಪುರುಷಂಗೆ ಚಿಂತಾಮಣಿ,
ಚಿಂತಿಸಿದುದನೀವುದಯ್ಯಾ.
ಅಧರ್ಮ ಪುರುಷಂಗೆ ಚಿಂತಾಮಣಿ,
ಗಾಜಿನ ಮಣಿಯಾಗಿ ತೋರುವುದಯ್ಯಾ.
ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ,
ಜಂಗಮಲಿಂಗವಾಗಿ ತೋರುವುದಯ್ಯಾ.
ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ,
ಮಾನವನಾಗಿ ತೋರುವುದಯ್ಯಾ.
ಉರಿಲಿಂಗಪೆದ್ದಿಗಳರಸ ಒಲ್ಲನವ್ವಾ.
Transliteration Bhāgyavuḷḷa puruṣaṅge kāmadhēnu,
kāmisidudanīvudayyā.
Nirbhāgya purunṣage kāmadhēnu,
tuḍuguṇiyāgi tōruvudayyā.
Satyapuruṣaṅge kalpavr̥kṣa,
kalpisidudanīvudayyā.
Asatyapuruṣaṅge kalpavr̥kṣa,
bobbuḷiyāgi tōruvudayyā.
Dharma puruṣaṅge cintāmaṇi,
cintisidudanīvudayyā.
Adharma puruṣaṅge cintāmaṇi,
gājina maṇiyāgi tōruvudayyā.
Śrīguru kāruṇyavuḷḷa sadbhaktaṅge,
jaṅgamaliṅgavāgi tōruvudayyā.
Bhaktanallada pāpiṣṭhaṅge jaṅgamaliṅga,
mānavanāgi tōruvudayyā.
Uriliṅgapeddigaḷarasa ollanavvā.