•  
  •  
  •  
  •  
Index   ವಚನ - 7    Search  
 
ನಿಜ ಬೋಳಿಂಗೆ ಲೋಚು ಮಾಡಲೇತಕ್ಕೆ? ಚಿದ್ಘನ ಬೋಳಿಂಗೆ ವೈಭವದ ಮದನನ ಶೃಂಗಾರದ ಹಾರವೇತಕ್ಕೆ? ಸಕಲಸುಖ ಬೋಳಿಂಗೆ ಅಖಿಳ ಸುಖಗೋಷ್ಠಿ ಏತಕ್ಕೆ? ಸರ್ವಸಂಗಪರಿತ್ಯಾಗ ನಿರ್ಮಲ ಪರಮನಿರ್ವಾಣಿಗೆ ತ್ರಿಬಂಧದಲ್ಲಿ ಸಿಲುಕಿ ಕಂಡವರಿಗೆ ಕಾರ್ಪಣ್ಯಬಡಲೇತಕ್ಕೆ? ಇಂತೀ ಗುಣದಲ್ಲಿ ತಾವು ತಾವು ಬಂದುದನರಿಯದೆ ತಮಗೆ ವಂದಿಸಿ ನಿಂದಿಸುವರಂಗವನರಿಯದೆ ಮತ್ತೆ ಲಿಂಗಾಂಗಿಗಳೆಂದು ನುಡಿವ ಜಗ ಸರ್ವಾಂಗ ಭಂಡರ ಕಂಡು ನುಡಿದಡೆ ಸಮಯಕ್ಕೆ ಹಾನಿ. ಸುಮ್ಮನಿದ್ದಡೆ ಜ್ಞಾನಕ್ಕೆ ಭಂಗ. ಉಭಯವನೂ ಪ್ರತಿಪಾದಿಸದಿದ್ದಡೆ, ತನ್ನಯ ಭಕ್ತಿಗೆ ಇದಿರೆಡೆಗೇಡು. ಇದು ಚುನ್ನವಲ್ಲ, ಎನ್ನಯ ಕೇಡು. ಈ ಗುಣ ಚೆನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ ಸಾಕ್ಷಿಯಾಗಿ.
Transliteration Nija bōḷiṅge lōcu māḍalētakke? Cidghana bōḷiṅge vaibhavada madanana śr̥ṅgārada hāravētakke? Sakalasukha bōḷiṅge akhiḷa sukhagōṣṭhi ētakke? Sarvasaṅgaparityāga nirmala paramanirvāṇige tribandhadalli siluki kaṇḍavarige kārpaṇyabaḍalētakke? Intī guṇadalli tāvu tāvu bandudanariyade tamage vandisi nindisuvaraṅgavanariyade matte liṅgāṅgigaḷendu nuḍiva jaga sarvāṅga bhaṇḍara kaṇḍu nuḍidaḍe samayakke hāni. Sum'maniddaḍe jñānakke bhaṅga. Ubhayavanū pratipādisadiddaḍe, tannaya bhaktige idireḍegēḍu. Idu cunnavalla, ennaya kēḍu. Ī guṇa cennabasavaṇṇapriya kamaḷēśvaraliṅga sākṣiyāgi.