ಆವ ಮಡಕೆಯಾಗಲಿ ಸ್ವಾದ
ಸಾಕಾರದಲ್ಲಿ ಭೇದವಿಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ-
ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!
Transliteration Āva maḍakeyāgali svāda
sākāradalli bhēdavilla.
Maṇṇa maḍake okkaliganalli,
cinnada maḍake aramaneyalli.
Aramane gurumane hiridāda kāraṇa-
hādara salladu kāṇā, tripurāntakaliṅgave!
Music
Courtesy: