ಕಲ್ಲಿಲಿಟ್ಟವಂಗೊಲಿದೆ,
ಕಾಲಲೊದ್ದವಂಗೊಲಿದೆ,
ಬಾಯಲ್ಲಿ ಉಗಿದವಂಗೊಲಿದೆ.
ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ!
ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ,
ಉಮೆಯ ವರ ತ್ರಿಪುರಾಂತಕಲಿಂಗವೆ.
Transliteration Kalliliṭṭavaṅgolide,
kālaloddavaṅgolide,
bāyalli ugidavaṅgolide.
Adu ninna bhaktiyō satyavō garvavō!
Traibhuvanaṅgaḷigabhēdya tiḷivaḍe ninna mahime,
umeya vara tripurāntakaliṅgave.