ಚಂದ್ರನ ಸೂಡುವವ ಲಿಂಗನೊ ಅಂಗನೊ?
ಸುಸಂಗದ ಮುಕುಟದಲ್ಲಿ
ಗಂಗೆಯ ಧರಿಸುವವ ಭಂಗನೊ
ಆಭಂಗನೊ?
ಭಕ್ತರಂಗದಿಚ್ಛೆಯಲ್ಲಿ ಅಡಗುವವ
ಬಂಧನೊ ನಿರ್ಬಂಧನೊ?
ಇದು ನನಗೆ ಸಂದೇಹವಾಗಿದೆ.
ತ್ರೈಭುವನಂಗಳಿಗೆ ಚೋದ್ಯ ನಿಮ್ಮ ಪರಿ,
ಅಂಬಿಕಾವರ ತ್ರಿಪುರಾಂತಕಲಿಂಗವೆ.
Transliteration Candrana sūḍuvava liṅgano aṅgano?
Susaṅgada mukuṭadalli
gaṅgeya dharisuvava bhaṅgano
ābhaṅgano?
Bhaktaraṅgadiccheyalli aḍaguvava
bandhano nirbandhano?
Idu nanage sandēhavāgide.
Traibhuvanaṅgaḷige cōdya nim'ma pari,
ambikāvara tripurāntakaliṅgave.