ಚಿನಿಪಾಲ ಚಿನ್ನದ ಹರಿವಾಣದಲ್ಲಿ
ಭೋಗಿಪುದು ಭೂಷಣವಲ್ಲದೆ,
ಮಣ್ಣ ಹರಿವಾಣದಲ್ಲಿ ಭೂಷಣವೆ?
ತಾ ಮಾಳ್ಪ ಶಿವಲಿಂಗ ಪೂಜೆಗೆ ಕಾಯ ಪವಿತ್ರವಲ್ಲದೆ,
ಅಪವಿತ್ರವೆಂತೊ ತ್ರಿಪುರಾಂತಕಲಿಂಗವೆ?
Transliteration Cinipāla cinnada harivāṇadalli
bhōgipudu bhūṣaṇavallade,
maṇṇa harivāṇadalli bhūṣaṇave?
Tā māḷpa śivaliṅga pūjege kāya pavitravallade,
apavitravento tripurāntakaliṅgave?