•  
  •  
  •  
  •  
Index   ವಚನ - 15    Search  
 
ವಿಷಯಂಗಳು ನಿರ್ವಿಷಯವಾದವಿಂದು, ಕರ್ಣಂಗಳು ತರಹರಿಸಿದವಿಂದು, ಎನ್ನ ಅಳುಪೆಂಬ ಅರೆವಾವು ಮಡಿಯಿತ್ತಿಂದು ಎನ್ನ ಹೃದಯದ ಕಲ್ಮಶ ತೊಡೆಯಿತ್ತಿಂದು ಮಹಾಲಿಂಗ ತ್ರಿಪುರಾಂತಕ, ಮಹಾದೇವಿಯಕ್ಕಗಳ ಧರ್ಮದಿಂದ ಹಿಂದಣ ಹುಟ್ಟು ಮುರಿಯಿತ್ತಿಂದು.
Transliteration Viṣayaṅgaḷu nirviṣayavādavindu, karṇaṅgaḷu taraharisidavindu, enna aḷupemba arevāvu maḍiyittindu enna hr̥dayada kalmaśa toḍeyittindu mahāliṅga tripurāntaka, mahādēviyakkagaḷa dharmadinda hindaṇa huṭṭu muriyittindu.