•  
  •  
  •  
  •  
Index   ವಚನ - 91    Search  
 
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
Transliteration Sakala vyāpāradalli vyavaharaṇeya māḍi bandu ninda dhareya mēle ayidu rūpāgi rūpiṅgaidu kuruhina bhēdadalli ārōpisi rūpu rūpininda aḷidu dr̥ṣṭava dr̥ṣṭadinda kābante ariva arivinda bhāvava bhāvadinda tanna tā kuruhiṭṭukoṇḍu tatva niścayavāgi nijava ninna nīnari, puṇyāraṇyadahana bhīmēśvaraliṅga niraṅgasaṅga.