ಕಲ್ಲಿಯ ಗಂಟು, ಲಲನೆಯರ ಮೋಹ,
ಪುಳಿಂದರ ವೇಷ, ಮಾರುತನ ಗ್ರಾಸ,
ಇಂತಿವರ ಇರವು ಗುರುಮಾರ್ಗದ ಬೋಧೆ.
ಜಲಚರ ಆಹಾರಕ್ಕೆ ಸಿಕ್ಕಿದ ಕೊರಳಿನ ವಿಧಿಯಂತೆ,
ನೆರೆಗೆ ಇಲ್ಲದ ಗುರುವಿನ ಕೈದೊಡಕಿನ ಶಿಷ್ಯ
ಅರಿವಿಂಗೆ ಬಡಿಹೋರಿಯಾದ.
ಇಂತಿವ ಕಂಡು ನೊಂದ ಸಂದೇಹಿಗೆ
ನೀ ಅಜಡನಾಗಿ ಎನ್ನ ಜಡವ ಉದ್ಧರವ ಮಾಡು
ಸದ್ಗುರುಮೂರ್ತಿ ನಾರಾಯಣಪ್ರಿಯ ರಾಮನಾಥಾ.
Transliteration Kalliya gaṇṭu, lalaneyara mōha,
puḷindara vēṣa, mārutana grāsa,
intivara iravu gurumārgada bōdhe.
Jalacara āhārakke sikkida koraḷina vidhiyante,
nerege illada guruvina kaidoḍakina śiṣya
ariviṅge baḍ'̔ihōriyāda.
Intiva kaṇḍu nonda sandēhige
nī ajaḍanāgi enna jaḍava ud'dharava māḍu
sadgurumūrti nārāyaṇapriya rāmanāthā.