ಬ್ರಹ್ಮ ಮಣಿಯಾದ ವಿಷ್ಣು ಬಲಿಯಾದ
ಸಕಲ ದೇವತಾ ಕುಲವೆಲ್ಲ ಗೊರುವ ದಾರವಾದರು
ವ್ಯಾಪಾರವೆಂಬ ಹೊಳೆಯಲ್ಲಿ ಬೀಸಲಾಗಿ
ಸಿಕ್ಕಿತ್ತು ಜೀವವೆಂಬ ಮತ್ಸ್ಯ.
ಆ ಮತ್ಸ್ಯಕ್ಕೆ ಕಣ್ಣು ಮೂರು, ಬಾಯಿ ಐದು,
ಗರಿ ಹದಿನಾರು, ಹಲ್ಲು ಎಂಟು,
ಆ ಹೊಲಸಿನ ಮುಳ್ಳು ಲೆಕ್ಕವಿಲ್ಲ.
ಕತ್ತಿಗಳವಡದು ಬೆಂಕಿಗೆ ಬೇಯದು.
ಈ ಶಂಕೆಯ ಇನ್ನಾರಿಗೆ ಹೇಳುವೆ,
ನಾರಾಯಣಪ್ರಿಯ ರಾಮನಾಥಾ.
Transliteration Brahma maṇiyāda viṣṇu baliyāda
sakala dēvatā kulavella goruva dāravādaru
vyāpāravemba hoḷeyalli bīsalāgi
sikkittu jīvavemba matsya.
Ā matsyakke kaṇṇu mūru, bāyi aidu,
gari hadināru, hallu eṇṭu,
ā holasina muḷḷu lekkavilla.
Kattigaḷavaḍadu beṅkige bēyadu.
Ī śaṅkeya innārige hēḷuve,
nārāyaṇapriya rāmanāthā.