ಮೋಹ ಮದ ರಾಗ ವಿಷಾದ ತಾಪ ಶೋಕ ವೈಚಿಂತೆ
ಎಂಬ ಸಪ್ತಮಲ ವ್ಯಸನ ಮದಂಗಳೆನ್ನನಾವರಿಸಿ
ಕಾಡುತ್ತಿವೆಯಯ್ಯಾ
ನಿಮ್ಮುವ ನಾನೆಂತರಿವೆನಯ್ಯಾ
ನಿಮ್ಮುವ ನಾನೆಂತು ನೆನೆವೆನಯ್ಯಾ?
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯ,
ಇಂತಿವ ಕಳೆದು, ಎನಗೆ ನಿಮ್ಮ ಪರಮಭಕ್ತಿಯ
ಪಾಲಿಸಯ್ಯ ನಿಮ್ಮ ಧರ್ಮ.
Transliteration Mōha mada rāga viṣāda tāpa śōka vaicinte
emba saptamala vyasana madaṅgaḷennanāvarisi
kāḍuttiveyayya.
Nim'muva nānentarivenayya?
Nim'muva nānentu nenevenayya?
Ghanaliṅgiya mōhada cennamallikārjunayya,
intiva kaḷedu,
enage nim'ma paramabhaktiya pālisayya nim'ma dharma.