ಕೋಹಮೆಂಬುದು ಪ್ರಸನ್ನಭಾವ.
ತನ್ನನರಿಸುವ ಕತದಿಂದ ನಿರಹಂಕಾರ,
ಪರಮ ವಿರಹಿತ, ವಿಷರಹಿತ.
ಏನೂ ಹೊರೆಹೊದ್ದದ ಸನ್ಮಾತ್ರ ಚಿನ್ಮಯ ಪರಮಾನಂದ
ತಿಳಿದು ನೋಡುವಡೆ, ನಿಜಗುಣ ತಾನೇ,
ಸಿಮ್ಮಲಿಗೆಯ ಚೆನ್ನರಾಮಾ.
Transliteration Kōhamembudu prasannabhāva.
Tannanarisuva katadinda nirahaṅkāra,
parama virahita, viṣarahita.
Ēnū horehoddada sanmātra cinmaya paramānanda
tiḷidu nōḍuvaḍe, nijaguṇa tānē,
sim'maligeya cennarāmā.