ತನ್ನ ಮರೆವಂದವ ಶ್ರೀ ಗುರುವಿನ
ವಚನದಿಂ ತಿಳಿದು ನೋಡಯ್ಯಾ,
ಪರಬ್ರಹ್ಮ ತಾನಾದಂದು
ತನ್ನ ತಾ ಮರೆವೆ ನೋಡಯ್ಯಾ.
ಇದನರಿದು ಸುಖಿಯಾದಾತ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.
Transliteration Tanna marevandava śrī guruvina
vacanadiṁ tiḷidu nōḍayyā,
parabrahma tānādandu
tanna tā mareve nōḍayyā.
Idanaridu sukhiyādāta nīnē,
sim'maligeya cennarāmā.