•  
  •  
  •  
  •  
Index   ವಚನ - 113    Search  
 
ಮನದಿಂದ ಸಂಸಾರ ಸುಖದುಃಖ ಮಾಯಾಮಯ ಈ ಮನದ ವಿಷಯದಲ್ಲಿ ಕೂಡಲೀಯದೆ ನಿಮ್ಮಲ್ಲಿ ನಿಲಿಸಿ ಆ ಮನ ತಾನು ತನ್ನ ನಿಜದಲ್ಲಿ ನಿಂದು ನೋಡೆ ಆ ನೋಡುವ ನೋಟ ಉಳಿದಂದು ಉಳಿದ ಪರಮಾನಂದ ನೀನೇ, ತಿಳಿದು ನೋಡಾ, ಸಿಮ್ಮಲಿಗೆಯೆ ಚೆನ್ನರಾಮಾ.
Transliteration Manadinda sansāra sukhaduḥkha māyāmaya ī manada viṣayadalli kūḍalīyade nim'malli nilisi ā mana tānu tanna nijadalli nindu nōḍe ā nōḍuva nōṭa uḷidandu uḷida paramānanda nīnē, tiḷidu nōḍā, sim'maligeye cennarāmā.