ಯತಿಗಳ ವ್ರತಿಗಳ ಧೃತಿಗೆಡಿಸಿತ್ತು ಮಾಯೆ.
ಕಲಿಗಳ ಛಲಿಗಳ ಬಲುಹ ಮುರಿಯಿತ್ತು ಮಾಯೆ.
ಹರಿ ಬ್ರಹ್ಮ ರುದ್ರಾದಿಗಳೆಲ್ಲರ ತರಕಟ ಕಾಡಿತ್ತು ಮಾಯೆ.
ಹೋ! ಹೋ!! ಸಿಮ್ಮಲಿಗೆಯ
ಚೆನ್ನರಾಮನೆಂಬ ಲಿಂಗದಲ್ಲಿ
ಮಾಯಾಮರ್ಕಟ ವಿಧಿಯೇ!
Transliteration Yatigaḷa vratigaḷa dhr̥tigeḍisittu māye.
Kaligaḷa chaligaḷa baluha muriyittu māye.
Hari brahma rudrādigaḷellara tarakaṭa kāḍittu māye.
Hō! Hō!! Sim'maligeya
cennarāmanemba liṅgadalli
māyāmarkaṭa vidhiyē!