ವಿಷಮದಶ ಪವನವನು ವಶಕ್ಕೆ ತಂದು ನಿಲ್ಲಿಸಿ
ಸುಷುಮ್ನ ಸುಸರದ ಊರ್ಧ್ವಪಥವನರಿದೆವೆಂದು
ರವಿಯ ನಾಲಗೆಯನಲನ ಕೊನೆಯ ಲಂಬಿಕಾಸ್ಥಾನವಾಗಿ
ಶಶಿಯಮೃತವನುಂಡು ಸುಖಿಯಾದೆನೆಂಬರು.
ಇವರೆಲ್ಲರು ಉಪಾಧಿಯನರಿಯದೆ ಹೋದರು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗದಲ್ಲಿ
ಬಯಲದ್ವೈತವ ನುಡಿವರು.
Transliteration Viṣamadaśa pavanavanu vaśakke tandu nillisi
suṣumna susarada ūrdhvapathavanaridevendu
raviya nālageyanalana koneya lambikāsthānavāgi
śaśiyamr̥tavanuṇḍu sukhiyādenembaru.
Ivarellaru upādhiyanariyade hōdaru.
Sim'maligeya cennarāmanemba liṅgadalli
bayaladvaitava nuḍivaru.