•  
  •  
  •  
  •  
Index   ವಚನ - 140    Search  
 
ಸಂಸಾರ ಮಾಯೆ ಅತಿದುಃಖ ಹೊಲ್ಲೆಂದು, ಆತ್ಮಜ್ಞಾನದಿಂದ ನಿತ್ಯಸುಖಿಯಪ್ಪುದೆ ಲೇಸೆಂದು, ಅರಿದವಂಗಾದ ಹೊಲ್ಲೆಹವೇನು? ಇದನೊಲ್ಲದವಂಗಾದ ಲೇಸೇನು ಹೇಳಾ! ಈ ದೇಹದಲುಣಬೇಡಿದ ಇಷ್ಟ ಕರ್ಮ ಇದಾವ ದೇಹಿಗೆ ಮಾದುದೊ? ನಿನ್ನ ನೀನೇ ಭಾವಿಸಿ ತಿಳಿದು ನೋಡಾ, ಸಿಮ್ಮಲಿಗೆಯ ಚೆನ್ನರಾಮನಿಕ್ಕಿದ ಸಂಸಾರದ ತೊಡಕು ಬಿಡಸಬಾರದು!
Transliteration Sansāra māye atiduḥkha hollendu, ātmajñānadinda nityasukhiyappude lēsendu, aridavaṅgāda hollehavēnu? Idanolladavaṅgāda lēsēnu hēḷā! Ī dēhadaluṇabēḍida iṣṭa karma idāva dēhige mādudo? Ninna nīnē bhāvisi tiḷidu nōḍā, sim'maligeya cennarāmanikkida sansārada toḍaku biḍasabāradu!