ಸಂಸಾರವೆಂಬ ಹೇರಡವಿಯ ಅಂಧಕಾರದ,
ಜನ್ಮಪಥದ ಆಧಿವ್ಯಾದಿಗಳೆಂಬ
ಗಿರಿದುರ್ಗ ಜಲದುರ್ಗಂಗಳ,
ಧನ ವನಿತೆ ವಿಷಯ ಮೃಗತೃಪ್ಣೆಯ ಬಳಿವಿಡಿದ
ರಾಗದ್ವೇಷದ ಕೊಳ್ಳೆದರಿಲುಗಳ,
ಖಗಮೃಗದ ಭಯದ,
ತಾಪತ್ರಯದ ಕಾಳುಗಿಚ್ಚಿನಲ್ಲಿ ಬೇವ ನರಗುರಿಗಳಾದ
ಸಾವ ಕೆಡುವ ಅಹಂಮಮತೆಯ ಹೊತ್ತು ನಡೆವ ಜೀವರಿಗೆ
ಭವಬಂಧನ ಹರಿದು ಗುರುಪದವಪ್ಪುದು
ನಿಜಗುಣನ ಶ್ರೀಪದವ ಶರಣುಗತಿ ಒಕ್ಕಡೆ, ನಿತ್ಯ ಸುಖಪೂರಿತ
ಸಿಮ್ಮಲಿಗೆಯ ಚೆನ್ನರಾಮ ತಾನಹ ನೆರೆ ನಂಬಿದಡೆ.
Transliteration Sansāravemba hēraḍaviya andhakārada,
janmapathada ādhivyādigaḷemba
giridurga jaladurgaṅgaḷa,
dhana vanite viṣaya mr̥gatr̥pṇeya baḷiviḍida
rāgadvēṣada koḷḷedarilugaḷa,
khagamr̥gada bhayada,
tāpatrayada kāḷugiccinalli bēva naragurigaḷāda
sāva keḍuva ahammamateya hottu naḍeva jīvarige
bhavabandhana haridu gurupadavappudu
nijaguṇana śrīpadava śaraṇugati okkaḍe, nitya sukhapūrita
sim'maligeya cennarāma tānaha nere nambidaḍe.