ಸಾಕಾರಸ್ವರೂಪಿ ಸಂಗನಬಸವಣ್ಣ ನೋಡಾ.
ನಿರಾಕಾರಸ್ವರೂಪಿ ಚನ್ನಬಸವಣ್ಣ ನೋಡಾ.
ನಿರ್ವಯಲ ಪರವಸ್ತುಸ್ವರೂಪಿ ಪ್ರಭುದೇವರು ನೋಡಾ.
ಇಂತೀ ಮೂವರ ಕಾರುಣ್ಯ ಪ್ರಸಾದವ ಕೊಂಡು
ಮೀರಿದ ಘನವಾದೆನು ಸಿಮ್ಮಲಿಗೆಯ ಚೆನ್ನರಾಮನಲ್ಲಿ.
Transliteration Sākārasvarūpi saṅganabasavaṇṇa nōḍā.
Nirākārasvarūpi cannabasavaṇṇa nōḍā.
Nirvayala paravastusvarūpi prabhudēvaru nōḍā.
Intī mūvara kāruṇya prasādava koṇḍu
mīrida ghanavādenu sim'maligeya cennarāmanalli.