•  
  •  
  •  
  •  
Index   ವಚನ - 147    Search  
 
ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ ಶಿವಸ್ಯ ಹೃದಯಂ ವಿಷ್ಣುರ್ವಿಷ್ಣೋಶ್ಚ ಹೃದಯಂ ಶಿವಃ ಯಥಾ ಶಿವಮಯೋ ವಿಷ್ಣುರೇವಂ ವಿಷ್ಣುಮಯಃ ಶಿವಃ|| ಇಂತೆಂಬ ಪಾತಕರು ನೀವು ಕೇಳಿಭೋ 'ಓಂ ಭೂಃ ಓಂ ಭುವಃ ಓಂ ಸ್ವಃ ಓಂ ಮಹಃ| 'ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ|| ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್' ಇಂತೆಂಬ ಶ್ರುತಿಯೊಳಗೆ ಆ ಶಬ್ದವುಳ್ಳರೆ ತೋರಿರೇ. ಹಿಂದನರಿಯರು, ಮುಂದ ವಿಚಾರಿಸರು. ಇಂತಪ್ಪ ದ್ವಿಜರನೇನೆಂಬೆ ಕೂಡಲಚೆನ್ನಸಂಗಮದೇವಾ.
Transliteration Śivāya viṣṇurūpāya śivarūpāya viṣṇavē śivasya hr̥dayaṁ viṣṇurviṣṇōśca hr̥dayaṁ śivaḥ yathā śivamayō viṣṇurēvaṁ viṣṇumayaḥ śivaḥ|| intemba pātakaru nīvu kēḷibhō 'ōṁ bhūḥ ōṁ bhuvaḥ ōṁ svaḥ ōṁ mahaḥ| 'ōṁ janaḥ ōṁ tapaḥ ōṁ satyaṁ ōṁ tatsaviturvarēṇyaṁ|| bhargō dēvasya dhīmahi dhiyō yō naḥ pracōdayāt' intemba śrutiyoḷage ā śabdavuḷḷare tōrirē. Hindanariyaru, munda vicārisaru. Intappa dvijaranēnembe kūḍalacennasaṅgamadēvā.