•  
  •  
  •  
  •  
Index   ವಚನ - 148    Search  
 
ಅನಲನೇ ಗುರುವೆಂದು ಇದಿರಾಸನವೇರಿ ಭಾಷೆಗೆ ತಪ್ಪುವ ಪಾತಕರ ವಿಧಿಯೆಂತೊ? "ವರ್ಣಾನಾಂ ಬ್ರಾಹ್ಮಣೋ ಗುರುಃ" ಎಂದು ವರ್ಣವನರಸುವ ಕುನ್ನಿಗಳ ವಿಧಿಯೆಂತೊ? 'ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಃ" ಎಂಬ [ಆದಿಯ] ಮರೆದವರ ಕೂಡಲಚೆನ್ನಸಂಗಯ್ಯನು ಇರಿದಿರಿದು ಸುಟ್ಟು ಮರೆವನಲ್ಲದೆ ಮೆರೆವನೆ?
Transliteration Analanē guruvendu idirāsanavēri bhāṣege tappuva pātakara vidhiyento? Varṇānāṁ brāhmaṇō guruḥ endu varṇavanarasuva kunnigaḷa vidhiyento? 'Ōṁ bhūḥ ōṁ bhuvaḥ ōṁ suvaḥ ōṁ mahaḥ ōṁ janaḥ ōṁ tapaḥ ōṁ satyaṁ ōṁ tatsaviturvarēṇyaṁ bhargō dēvaḥ emba [ādiya] maredavara kūḍalacennasaṅgayyanu iridiridu suṭṭu marevanallade merevane?