ಲಿಂಗಕ್ಕೆಂದು ಮಾಡುವೆನು,
ಲಿಂಗಕ್ಕೆಂದು ನೀಡುವೆನು ನೋಡಯ್ಯಾ.
ಲಿಂಗಕ್ಕೆಂದು ಭಾವಿಸುವೆನು,
ಅಂಗಗುಣಂಗಳನರಿಯೆನಾಗಿ.
ಲಿಂಗಕ್ಕೆಂದು ಕಾಮಿಸುವೆನು ನಿಃಕಾಮಿಯಾಗಿ,
ಲಿಂಗಕ್ಕೆಂದು ತಹೆನಲ್ಲದೆ,
ಅಂಗಕ್ಕೆಂದು ಬಯಸಿದರೆ
ಲಿಂಗಾರ್ಪಿತಕ್ಕೆ ಸಲ್ಲದಾಗಿ.
ಲಿಂಗಕ್ಕೆಂದು ಕೊಟ್ಟು ಕೊಂಬೆನಲ್ಲದೆ,
ಅನರ್ಪಿತವನರಿಯೆ ಕೂಡಲ
ಚೆನ್ನಸಂಗಮದೇವಾ.
Transliteration Liṅgakkendu māḍuvenu,
liṅgakkendu nīḍuvenu nōḍayyā.
Liṅgakkendu bhāvisuvenu,
aṅgaguṇaṅgaḷanariyenāgi.
Liṅgakkendu kāmisuvenu niḥkāmiyāgi,
liṅgakkendu tahenallade,
aṅgakkendu bayasidare
liṅgārpitakke salladāgi.
Liṅgakkendu koṭṭu kombenallade,
anarpitavanariye kūḍala
cennasaṅgamadēvā.