•  
  •  
  •  
  •  
Index   ವಚನ - 282    Search  
 
ಶಿವಕ್ಷೇತ್ರದಲಾದ ಪದಾರ್ಥವ, ಕಿಂಕಿಲದಿಂದ ಅತಿಪ್ರೇಮದಿಂದ ತನು[ವಾಂಶಿಕ] ಮುಟ್ಟಲೀಯದೆ ಲಿಂಗಾರ್ಪಿತವ ಮಾಡೂದು, ಆ ಪ್ರಸಾದವ ಸತಿಸುತರಿಗೆನ್ನದೆ ಭೃತ್ಯಾಚಾರದಲ್ಲಿ ಗ್ರಹಿಸೂದು. ಪ್ರಸಾದ ಬೀಸರವಾದರೆ ಭಕ್ತಿ ಸಹಜವಾಗದು, ನಿಮಗೆಂದೂ ದೂರ ಕೂಡಲಚೆನ್ನಸಂಗಮದೇವಾ.
Transliteration Śivakṣētradalāda padārthava, kiṅkiladinda atiprēmadinda tanu[vānśika] muṭṭalīyade liṅgārpitava māḍūdu, ā prasādava satisutarigennade bhr̥tyācāradalli grahisūdu. Prasāda bīsaravādare bhakti sahajavāgadu, nimagendū dūra kūḍalacennasaṅgamadēvā.