•  
  •  
  •  
  •  
Index   ವಚನ - 290    Search  
 
ಲಿಂಗದಲ್ಲಿ ಸೂತಕವ ಹಿಡಿವನ್ನಕ್ಕ ಪ್ರಣಲಿಂಗ ಸಂಬಂಧಿಯೆಂತೆಂಬೆ? ಜಂಗಮದಲ್ಲಿ ಸೂತಕವ ಹಿಡಿವನ್ನಕ್ಕ ಅನುಭಾವಿಯೆಂತೆಂಬೆ? ಪ್ರಸಾದದಲ್ಲಿ ಸೂತಕವ ಹಿಡಿವನ್ನಕ್ಕ ಸ್ವಾಮಿಭೃತ್ಯಸಂಬಂಧಿಯೆಂತೆಂಬೆ? ಭಕ್ತನೆಂತೆಂಬೆ, ಪ್ರಸಾದಿಯೆಂತೆಂಬೆ, ಕೂಡಲಚೆನ್ನಸಂಗನಲ್ಲಿ ಶರಣನೆಂತೆಂಬೆ?
Transliteration Liṅgadalli sūtakava hiḍivannakka praṇaliṅga sambandhiyentembe? Jaṅgamadalli sūtakava hiḍivannakka anubhāviyentembe? Prasādadalli sūtakava hiḍivannakka svāmibhr̥tyasambandhiyentembe? Bhaktanentembe, prasādiyentembe, kūḍalacennasaṅganalli śaraṇanentembe?