ಪ್ರಾಣಲಿಂಗದಲ್ಲಿ ಪ್ರಸಾದಕಾಯವಂತನೆಂತೆಂಬೆ?
ಆರಾಧ್ಯಲಿಂಗದಲ್ಲಿ ಸಮಯಾಚಾರವಂತನೆಂತೆಂಬೆ?
ಆಚಾರವಿಲ್ಲದ ಕಾಯ ಪ್ರಯೋಜನಕ್ಕೆ ಸಲ್ಲದು,
ಸಮಯವಿಲ್ಲದಾಚಾರಕ್ಕೆ ಆಶ್ರಯವಿಲ್ಲ.
ಆಚಾರಸ್ಥಲ ಆರಾಧ್ಯಸ್ಥಲ ಪ್ರಸಾದಸ್ಥಲ ಪ್ರತಿಗ್ರಾಹಕನಾಗಿ,
"ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ"
ಇದು ಕಾರಣ, ಕೂಡಲಚೆನ್ನಸಂಗಾ,
ನಿಮ್ಮ ಶರಣನ ಲಿಂಗದೇವನೆಂಬೆನು.
Transliteration Prāṇaliṅgadalli prasādakāyavantanentembe?
Ārādhyaliṅgadalli samayācāravantanentembe?
Ācāravillada kāya prayōjanakke salladu,
samayavilladācārakke āśrayavilla.
Ācārasthala ārādhyasthala prasādasthala pratigrāhakanāgi,
sthāvaraṁ jaṅgamaścaiva dvividhaṁ liṅgamucyatē
idu kāraṇa, kūḍalacennasaṅgā,
nim'ma śaraṇana liṅgadēvanembenu.