•  
  •  
  •  
  •  
Index   ವಚನ - 484    Search  
 
ಆಹ್ವಾನಿಸುವಲ್ಲಿ ಪ್ರಸೂತಿಕಾಯ, ಸ್ವತಂತ್ರನೆಂತೆಂಬೆ? ವಿಸರ್ಜಿಸುವಲ್ಲಿ ಲಿಂಗಸಂತುಷ್ಟನೆಂತೆಂಬೆ? ಆಧಾರಾಧೇಯದ ಸುಳುಹಲ್ಲ, ಆಧಾರಾಧೇಯ[ದ] ಭಾವವಲ್ಲ. ಬಿಂದು ಕ್ರೀಯನುಂಡು ಬಿಂದು ತಾನಾದುದು. ಪ್ರಾಣಾಪಾನದ ಅನುವಿನ ಅನುಸಂಧಾನ[ದ] ಮನವು. ಅಸಮಾನ ತಾಳೋಷ್ಠ ಶಬ್ದಸಂಚಿತನಲ್ಲ, ಉಭಯಪ್ರಸೂತಿ ಕಾಯವಿರಹಿತ ಕೂಡಲಚೆನ್ನಸಂಗಾ ನಿಮ್ಮ ಶರಣ.
Transliteration Āhvānisuvalli prasūtikāya, svatantranentembe? Visarjisuvalli liṅgasantuṣṭanentembe? Ādhārādhēyada suḷuhalla, ādhārādhēya[da] bhāvavalla. Bindu krīyanuṇḍu bindu tānādudu. Prāṇāpānada anuvina anusandhāna[da] manavu. Asamāna tāḷōṣṭha śabdasan̄citanalla, ubhayaprasūti kāyavirahita kūḍalacennasaṅgā nim'ma śaraṇa.