ತನು ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ,
ಮನ ಮುಟ್ಟಿದ ಪದಾರ್ಥ ಲಿಂಗಾರ್ಪಿತವಲ್ಲ,
ಕಿವಿಗಳು ಕೇಳಿದ ಪದಾರ್ಥ ಲಿಂಗಾರ್ಪಿತವಲ್ಲ,
ಕಂಗಳು ನೋಡಿದ ಪದಾರ್ಥ ಲಿಂಗಾರ್ಪಿತವಲ್ಲ,
ಘ್ರಾಣ ಸೋಂಕಿದ ಪದಾರ್ಥ ಲಿಂಗಾರ್ಪಿತವಲ್ಲ,
ಜಿಹ್ವೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ.
ತ್ವಚೆ ತಾಗಿದ ಪದಾರ್ಥ ಲಿಂಗಾರ್ಪಿತವಲ್ಲ.
ಅಹುದೆಂಬುದ [ನುಡಿಯ], ಅಲ್ಲೆಂಬುದ ನುಡಿಯ,
ಬೇಕು ಬೇಡೆಂಬುದಿಲ್ಲ, ಸಾವಯವೆಂಬುದಿಲ್ಲ.
ನಿರವಯದಲ್ಲಿ ಸಕಲಭೋಗಂಗಳ ಭೋಗಿಸುವನು.
ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ.
Transliteration Tanu muṭṭida padārtha liṅgārpitavalla,
mana muṭṭida padārtha liṅgārpitavalla,
kivigaḷu kēḷida padārtha liṅgārpitavalla,
kaṅgaḷu nōḍida padārtha liṅgārpitavalla,
ghrāṇa sōṅkida padārtha liṅgārpitavalla,
jihve tāgida padārtha liṅgārpitavalla.
Tvace tāgida padārtha liṅgārpitavalla.
Ahudembuda [nuḍiya], allembuda nuḍiya,
bēku bēḍembudilla, sāvayavembudilla.
Niravayadalli sakalabhōgaṅgaḷa bhōgisuvanu.
Kūḍalacennasaṅgā nim'ma prasādi.