•  
  •  
  •  
  •  
Index   ವಚನ - 692    Search  
 
ಲಿಂಗ ಲಿಂಗವೆಂದಲ್ಲಿಯೇ ತಪ್ಪಿತ್ತು, ಜಂಗಮ ಜಂಗಮವೆಂದಲ್ಲಿಯೇ ತಪ್ಪಿತ್ತು, ಪ್ರಸಾದ ಪ್ರಸಾದವೆಂದಲ್ಲಿಯೇ ತಪ್ಪಿತ್ತು. ಈ ತ್ರಿವಿಧದ ನಿಕ್ಷೇಪದ ಸಂಚವ ಬಲ್ಲರೆ ಈ ಲೋಕದಲ್ಲಿ ಇದ್ದರೇನು? ಆ ಲೋಕಕ್ಕೆ ಹೋದರೇನು? ಆ ಲೋಕದಿಂದ ಈ ಲೋಕಕ್ಕೆ ಬಂದರೇನು? ಹದಿನಾಲ್ಕು ಭುವನದೊಳಗಿದ್ದ ನಿಸ್ಸಾರಮಂ ಬಿಟ್ಟು ಲಿಂಗಸಾರಾಯ ಮೋಹಿಯಾಗಿ ಕೂಡಲಚೆನ್ನಸಂಗನಲ್ಲಿ ನಿರ್ಲೇಪನಾದ ಶರಣ.
Transliteration Liṅga liṅgavendalliyē tappittu, jaṅgama jaṅgamavendalliyē tappittu, prasāda prasādavendalliyē tappittu. Ī trividhada nikṣēpada san̄cava ballare ī lōkadalli iddarēnu? Ā lōkakke hōdarēnu? Ā lōkadinda ī lōkakke bandarēnu? Hadinālku bhuvanadoḷagidda nis'sāramaṁ biṭṭu liṅgasārāya mōhiyāgi kūḍalacennasaṅganalli nirlēpanāda śaraṇa.