•  
  •  
  •  
  •  
Index   ವಚನ - 705    Search  
 
ಪವನದ ಕಡೆಯಿಂದ ಪರಿಮಳ ಬೀಸರವಾಯಿತ್ತು, ನುಡಿಗಡಣದಿಂದ ಅನುಭಾವ ಬೀಸರವಾಯಿತ್ತು, ಮಾಟದ ಬೆರಕೆಯಿಂದ ಭಕ್ತಿ ಬೀಸರವಾಯಿತ್ತು, ಕೂಟದ ಬೆರಕೆಯಿಂದ ಅರಿವು ಬೀಸರವಾಯಿತ್ತು, ಸೂಕ್ಷ್ಮಶಿವಪಥವು ಸಾಮಾನ್ಯರಿಗಳವೆ? ಕೂಡಲಚೆನ್ನಸಂಗಯ್ಯನ ಶರಣರಿಗಲ್ಲದಿಲ್ಲ.
Transliteration Pavanada kaḍeyinda parimaḷa bīsaravāyittu, nuḍigaḍaṇadinda anubhāva bīsaravāyittu, māṭada berakeyinda bhakti bīsaravāyittu, kūṭada berakeyinda arivu bīsaravāyittu, sūkṣmaśivapathavu sāmān'yarigaḷave? Kūḍalacennasaṅgayyana śaraṇarigalladilla.