ಅಪರವಿಲ್ಲದಂದು, ಪರಬ್ರಹ್ಮವಿಲ್ಲದಂದು,
ಆದಿಯಿಲ್ಲದಂದು ಅನಾದಿಯಿಲ್ಲದಂದು,
ಸದಾಶಿವನಿಲ್ಲದಂದು ಶಿವನಿಲ್ಲದಂದು,
ಆನು ನೀನೆಂಬುದು ತಾನಿಲ್ಲದಂದು,
ಕೂಡಲಚೆನ್ನಸಂಗಯ್ಯ ಏನೂ ಎನ್ನದಿರ್ದನಂದು.
Transliteration Aparavilladandu, parabrahmavilladandu,
ādiyilladandu anādiyilladandu,
sadāśivanilladandu śivanilladandu,
ānu nīnembudu tānilladandu,
kūḍalacennasaṅgayya ēnū ennadirdanandu.