•  
  •  
  •  
  •  
Index   ವಚನ - 971    Search  
 
ಅರಿವು ನಾಸ್ತಿಯಾದುದೆ ಗುರು, ಕುರುಹು ನಾಸ್ತಿಯಾದುದೆ ಲಿಂಗ, ಕಾಯಗುಣ ನಾಸ್ತಿಯಾದುದೆ ವಿಭೂತಿ, ಕರಣಗುಣನಾಸ್ತಿಯಾದುದೆ ರುದ್ರಾಕ್ಷಿ, ಮರಣ ನಾಸ್ತಿಯಾದುದೆ ಮಂತ್ರ- ಇಂತೀ ಪಂಚಾಚಾರ ಪ್ರತಿಷ್ಠೆಯುಳ್ಳಾತನೆ ಕೂಡಲಚೆನ್ನಸಂಗಯ್ಯನಲ್ಲಿ ಸದಾಚಾರಿ.
Transliteration Arivu nāstiyādude guru, kuruhu nāstiyādude liṅga, kāyaguṇa nāstiyādude vibhūti, karaṇaguṇanāstiyādude rudrākṣi, maraṇa nāstiyādude mantra- intī pan̄cācāra pratiṣṭheyuḷḷātane kūḍalacennasaṅgayyanalli sadācāri.