•  
  •  
  •  
  •  
Index   ವಚನ - 1004    Search  
 
ಆದಿ ಅನಾದಿ ಆತ್ಮವಿವೇಕ ಅನುಭಾವಸಂಬಂಧ ಎಂತಿಪ್ಪುದೆಂದಡೆ; ಆದಿಯೆ ದೇಹ, ಅನಾದಿಯೆ ಆತ್ಮ. ಇಂತೀ ಆದಿ ಅನಾದಿಯ ಮೇಲಿಪ್ಪುದೆ ಪರಮಪ್ರಣವ. ಆ ಪರಮಪ್ರಣವದ ಪರಮಪ್ರಕಾಶವೆ ಚಿಚ್ಭಕ್ತಿ. ಆ ಚಿಚ್ಭಕ್ತಿಯ ಸುವರ್ಣಪ್ರಭೆಯ ಮೇಲಣ ಪರಮನಾದವೆ ಸುನಾದಬ್ರಹ್ಮ. ಆ ಸುನಾದಬ್ರಹ್ಮದ ಮೇಲಣ ಸೂಕ್ಷ್ಮಲಿಂಗವೆ ನಾದಬಿಂದು ಕಳಾತೀತವಾದ ಜ್ಯೋತಿರ್ಮಯಲಿಂಗ. ಆ ಲಿಂಗದಿಂದೊಗೆದ ದೇಹೇಂದ್ರಿಯ ಮನಃ ಪ್ರಾಣಾದಿಗಳೆಲ್ಲ ಆ ಲಿಂಗದ ಉಪಕರಣಂಗಳಾದ ಕಾರಣ ಆ ಮನಃ ಪ್ರಾಣಾದಿಗಳೆಲ್ಲ ಆ ಪರವಸ್ತುವಿಗೆ ಭಿನ್ನವೆಂಬ ಅಜ್ಞಾನಿಯ ಮೆಚ್ಚ ಕೂಡಲಚೆನ್ನಸಂಗಯ್ಯ.
Transliteration Ādi anādi ātmavivēka anubhāvasambandha entippudendaḍe; ādiye dēha, anādiye ātma. Intī ādi anādiya mēlippude paramapraṇava. Ā paramapraṇavada paramaprakāśave cicbhakti. Ā cicbhaktiya suvarṇaprabheya mēlaṇa paramanādave sunādabrahma. Ā sunādabrahmada mēlaṇa sūkṣmaliṅgave nādabindu kaḷātītavāda jyōtirmayaliṅga. Ā liṅgadindogeda dēhēndriya manaḥ prāṇādigaḷella ā liṅgada upakaraṇaṅgaḷāda kāraṇa ā manaḥ prāṇādigaḷella ā paravastuvige bhinnavemba ajñāniya mecca kūḍalacennasaṅgayya.