ಐಕ್ಯಂಗೆ ಆತ್ಮನೆ ಅಂಗ,
ಆ ಅಂಗಕ್ಕೆ ಸದ್ಭಾವವೇ ಹಸ್ತ;
ಆ ಹಸ್ತಕ್ಕೆ ಮಹಾಸಾದಾಖ್ಯ,
ಆ ಸಾದಾಖ್ಯಕ್ಕೆ ಚಿಚ್ಛಕ್ತಿ.
ಆ ಶಕ್ತಿಗೆ ಮಹಾಲಿಂಗ,
ಆ ಲಿಂಗಕ್ಕೆ ಶಾಂತತೀತೋತ್ತರವೆ ಕಲೆ;
ಆ ಕಲೆಗೆ ಹೃದಯೇಂದ್ರಿಯವೆ ಮುಖ,
ಆ ಮುಖಕ್ಕೆ ಸುಪರಿಣಾಮದ್ರವ್ಯಂಗಳನು
ರೂಪು ರುಚಿ ತೃಪ್ತಿಯನರಿದು,
ಸಮರಸಭಕ್ತಿಯಿಂದರ್ಪಿಸಿ,
ಆ ಸುಪರಿಣಾಮಪ್ರಸಾದವ
ಭೋಗಿಸಿ ಸುಖಿಸುತ್ತಿಹನು,
ಕೂಡಲಚೆನ್ನಸಂಗಾ, ನಿಮ್ಮ ಲಿಂಗೈಕ್ಯನು.
Transliteration Aikyaṅge ātmane aṅga,
ā aṅgakke sadbhāvavē hasta;
ā hastakke mahāsādākhya,
ā sādākhyakke cicchakti.
Ā śaktige mahāliṅga,
ā liṅgakke śāntatītōttarave kale;
ā kalege hr̥dayēndriyave mukha,
ā mukhakke supariṇāmadravyaṅgaḷanu
rūpu ruci tr̥ptiyanaridu,
samarasabhaktiyindarpisi,
ā supariṇāmaprasādava
bhōgisi sukhisuttihanu,
kūḍalacennasaṅgā, nim'ma liṅgaikyanu.