ಕ್ರೀಯೆಂಬುದನಾರು ಬಲ್ಲರು?
ಅಂಗಲಿಂಗವೆಂಬ ಸಂದಳಿಯದುದು ಕ್ರೀಯಲ್ಲ,
ಲಿಂಗಜಂಗಮವೆಂಬ ಸಂದಳಿಯದುದು ಕ್ರೀಯಲ್ಲ.
ಅರ್ಪಿತ ಅನರ್ಪಿತವೆಂಬ ಸಂದಳಿಯದುದು ಕ್ರೀಯಲ್ಲ.
ಅಲ್ಲ ಎನಲಿಲ್ಲ.
ಇಂತೀ ಕ್ರೀಯೊಳಗಿದ್ದ ನಿಷ್ಕ್ರೀವಂತರ ತೋರಾ.
ನಿಷ್ಕ್ಟೀಯೆಂಬುದಾವುದು?
ಕ್ರೀ ತನು-ನಿಷ್ಕ್ರೀ ಪ್ರಾಣ,
ತನುವೆ ಲಿಂಗ-ಪ್ರಾಣವೆ ಜಂಗಮ.
ತನುವ ಸಯವ ಮಾಡಿ,
ಆ ಪ್ರಾಣಲಿಂಗಜಂಗಮಕ್ಕೆ
ಮನವನರ್ಪಿಸುವ ನಿಷ್ಕ್ರೀಪ್ರಸಾದಿಗಳ ತೋರಾ.
ಕೂಡಲಚೆನ್ನಸಂಗಮದೇವಾ
ನಿಮ್ಮ ಧರ್ಮ, ನಿಮ್ಮ ಧರ್ಮ.
Transliteration Krīyembudanāru ballaru?
Aṅgaliṅgavemba sandaḷiyadudu krīyalla,
liṅgajaṅgamavemba sandaḷiyadudu krīyalla.
Arpita anarpitavemba sandaḷiyadudu krīyalla.
Alla enalilla.
Intī krīyoḷagidda niṣkrīvantara tōrā.
Niṣkṭīyembudāvudu?
Krī tanu-niṣkrī prāṇa,
tanuve liṅga-prāṇave jaṅgama.
Tanuva sayava māḍi,
ā prāṇaliṅgajaṅgamakke
manavanarpisuva niṣkrīprasādigaḷa tōrā.
Kūḍalacennasaṅgamadēvā
nim'ma dharma, nim'ma dharma.