ಗುರು ಲಿಂಗ ಜಂಗಮವೇಕವಾದುದೆ ಗುರುವಲ್ಲದೆ,
ಪಿತ-ಮಾತೆ, ಸತಿ-ಸುತ,
ಅತ್ತೆ-ಮಾವ ಇದಲ್ಲದೆ
ಯೋಗಿ-ಜೋಗಿ, ಶ್ರವಣ-ಸನ್ಯಾಸಿ,
ಕಾಳಾಮುಖಿ-ಪಾಶುಪತಿ ಎಂಬ
ಷಡುದರ್ಶನದ ಶೈವಕರ್ಮಿಗಳ
ʼಗುರುವು ಗುರುವು' ಎಂಬುದಕ್ಕೆ
ನಾಚದವರನೇನೆಂಬೆನಯ್ಯಾ?
ಆ ಮಹಾಘನಗುರುವಿಂಗೆ,
ಇಂತಿವರನೆಲ್ಲರ ಸರಿಗಂಡಡೆ,
ಒಂದೆ ಎಂದು ನುಡಿದಡೆ,
ಅಘೋರನರಕ ತಪ್ಪದಯ್ಯಾ
ಕೂಡಲಚೆನ್ನಸಂಗಮದೇವಾ.
Transliteration Guru liṅga jaṅgamavēkavādude guruvallade,
pita-māte, sati-suta,
atte-māva idallade
yōgi-jōgi, śravaṇa-san'yāsi,
kāḷāmukhi-pāśupati emba
ṣaḍudarśanada śaivakarmigaḷa
ʼguruvu guruvu' embudakke
nācadavaranēnembenayyā?
Ā mahāghanaguruviṅge,
intivaranellara sarigaṇḍaḍe,
onde endu nuḍidaḍe,
aghōranaraka tappadayyā
kūḍalacennasaṅgamadēvā.