ಜಂಗಮಪಾದವು ಪರಮಪವಿತ್ರವಾಗಿರ್ಪುದಯ್ಯಾ,
ಜಂಗಮಪಾದವು ಜಗದ್ಭರಿತವಾಗಿರ್ಪುದಯ್ಯಾ,
ಜಂಗಮಪಾದವು ಆದಿಯಿಂದತ್ತತ್ತಲಾಗಿರ್ಪುದಯ್ಯಾ,
`ಚರಣಂ ಪವಿತ್ರಂ ವಿತತಂ ಪುರಾಣಮ್' ಎಂದುದಾಗಿ,
ಜಂಗಮದ ಶ್ರೀಪಾದವ ಭಕ್ತಿಯಿಂದ ಪಿಡಿದ ಸದ್ಭಕ್ತನು
ದುರಿತಾಂಬುಧಿಯಿಂದ ದೂರವಾಗಿರ್ಪನಯ್ಯಾ
ಕೂಡಲಚೆನ್ನಸಂಗಮದೇವಾ.
Transliteration Jaṅgamapādavu paramapavitravāgirpudayyā,
jaṅgamapādavu jagadbharitavāgirpudayyā,
jaṅgamapādavu ādiyindattattalāgirpudayyā,
`caraṇaṁ pavitraṁ vitataṁ purāṇam' endudāgi,
jaṅgamada śrīpādava bhaktiyinda piḍida sadbhaktanu
duritāmbudhiyinda dūravāgirpanayyā
kūḍalacennasaṅgamadēvā.