•  
  •  
  •  
  •  
Index   ವಚನ - 1359    Search  
 
ಪಂಚಬ್ರಹ್ಮ ಮಂತ್ರವೆ ಶಿವನ ದೇಹವೆಂದರಿವುದಯ್ಯಾ. ಶಿರವೆ ಈಶಾನ, ಮುಖವೆ ತತ್ಪುರುಷ, ಹೃದಯವೆ ಅಘೋರ, ಗುಹ್ಯವೆ ವಾಮದೇವ, ಪಾದವೆ ಸದ್ಯೋಜಾತಮಂತ್ರವಯ್ಯಾ! ಇಂತೀ ಪಂಚಮಂತ್ರತನುರೂಪಾದವ ನೀನೆ ಕೂಡಲ[ಚೆನ್ನ]ಸಂಗಮದೇವಾ.
Transliteration Pan̄cabrahma mantrave śivana dēhavendarivudayyā. Śirave īśāna, mukhave tatpuruṣa, hr̥dayave aghōra, guhyave vāmadēva, pādave sadyōjātamantravayyā! Intī pan̄camantratanurūpādava nīne kūḍala[cenna]saṅgamadēvā.