•  
  •  
  •  
  •  
Index   ವಚನ - 1360    Search  
 
ಪಂಚಶತಕೋಟಿ ವಿಸ್ತೀರ್ಣ ಭೂಮಂಡಲ ಮೊದಲಾದ ನವಖಂಡಪೃಥ್ವಿಯೆಲ್ಲವು ಒಂದು ಭುವನದೊಳಡಗಿತ್ತು. ಇಂತಹ ಈರೇಳು ಭುವನವನೊಳಕೊಂಡ ಮಹಾಘನಕ್ಕೆ ಸಯದಾನವ ನೀಡಿಹೆನೆಂಬ ಸ್ವಾಮಿಯ ಮರುಳತನವನೇನೆಂಬೆನು? ಕೂಡಲಚೆನ್ನಸಂಗಮದೇವರ ತೃಪ್ತಿಯ ತೆರನನೊಲಿವಡೆ ನೀವು ಬೋನ, ನಾನು ಪದಾರ್ಥ. ಇದರಿಂದ ಮೇಲೇನೂ ಘನವಿಲ್ಲ ಕಾಣಾ ಸಂಗನಬಸವಣ್ಣಾ.
Transliteration Pan̄caśatakōṭi vistīrṇa bhūmaṇḍala modalāda navakhaṇḍapr̥thviyellavu ondu bhuvanadoḷaḍagittu. Intaha īrēḷu bhuvanavanoḷakoṇḍa mahāghanakke sayadānava nīḍ'̔ihenemba svāmiya maruḷatanavanēnembenu? Kūḍalacennasaṅgamadēvara tr̥ptiya terananolivaḍe nīvu bōna, nānu padārtha. Idarinda mēlēnū ghanavilla kāṇā saṅganabasavaṇṇā.