•  
  •  
  •  
  •  
Index   ವಚನ - 1371    Search  
 
ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ ಗುರುಕೃಪೆಯಿಂದ ಲಿಂಗಮೂರ್ತಿಯಾಗಿ ಬಿಜಯಂಗೈದಿರ್ಪುದು ಕಂಡಾ! ಅದು ಕಾರಣ, ಶರಣಂಗೆಯೂ ಲಿಂಗಕ್ಕೆಯೂ ಭೇದಾಭೇದ ಸಂಬಂಧವಿರ್ಪುದು ಕಂಡಾ! ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು, ಲಿಂಗವು ಕೈಲಾಸದ ಶಿವನ ಕುರುಹಾದುದರಿಂದ ಪೂಜ್ಯವೆಂಬರು; ಶರಣನು ಮನುಜನಾದುದರಿಂದ ಅವನು ಪೂಜಕನೆಂಬರು. ಇಂತೀ ಕೇವಲ ಭೇದಸಂಬಂಧ ಕಲ್ಪಿಸುವ ಭವಭಾರಿಗಳು ಶಿವಾದ್ವೈತಕ್ಕೆ ದೂರವಾಗಿಪ್ಪರು ಕಂಡಾ! ಅರೆಯರಿವಿನ ನರಜೀವಿಗಳು ಶರಣರ ಸಾಮರಸ್ಯಕ್ಕೆ ಹೊರಗಾಗಿರ್ಪರು ಕಂಡಾ, ಕೂಡಲಚೆನ್ನಸಂಗಮದೇವಾ.
Transliteration Parabom'mave śaraṇana śiradaramaneyinda karadaramanege gurukr̥peyinda liṅgamūrtiyāgi bijayaṅgaidirpudu kaṇḍā! Adu kāraṇa, śaraṇaṅgeyū liṅgakkeyū bhēdābhēda sambandhavirpudu kaṇḍā! Ī gottanariyade yuktigeṭṭa manujaru, liṅgavu kailāsada śivana kuruhādudarinda pūjyavembaru; śaraṇanu manujanādudarinda avanu pūjakanembaru. Intī kēvala bhēdasambandha kalpisuva bhavabhārigaḷu śivādvaitakke dūravāgipparu kaṇḍā! Areyarivina narajīvigaḷu śaraṇara sāmarasyakke horagāgirparu kaṇḍā, kūḍalacennasaṅgamadēvā.