•  
  •  
  •  
  •  
Index   ವಚನ - 1409    Search  
 
ಪ್ರಾಣಲಿಂಗ ಓಸರಿಸಿತ್ತು ಓಸರಿಸಿತ್ತು ಎಂಬಿರಯ್ಯಾ, ಪ್ರಾಣಲಿಂಗ ಓಸರಿಸಿದಡೆ ಕಾಯವೇಕೆ ಬೀಳದು ಹೇಳಿರೆ? ಪ್ರಾಣಲಿಂಗ ಓಸರಿಸಬಲ್ಲುದೆ ಸರ್ವಭುವನದೊಡೆಯನು? ಈ ಪ್ರಾಣಲಿಂಗ ಓಸರಿಸಿದುದೆಂದು, ಸಮಾಧಿಯ ಹೊಗುವ[ರ] ಮುಸುಡ ನೋಡಲಾಗದು ಕಾಣಾ, ಕೂಡಲಚೆನ್ನಸಂಗಮದೇವಾ.
Transliteration Prāṇaliṅga ōsarisittu ōsarisittu embirayyā, prāṇaliṅga ōsarisidaḍe kāyavēke bīḷadu hēḷire? Prāṇaliṅga ōsarisaballude sarvabhuvanadoḍeyanu? Ī prāṇaliṅga ōsarisidudendu, samādhiya hoguva[ra] musuḍa nōḍalāgadu kāṇā, kūḍalacennasaṅgamadēvā.