ಭಕ್ತರ ಮಠವನರಸಿಕೊಂಡು ಹೋಗಿ,
ಭಕ್ತದೇಹಿಕ ದೇವನೆಂದು ಶ್ರುತಿವಾಕ್ಯವ ಕೇಳಿ,
ಭಕ್ತನೆ ದೇವನೆಂದರಿದು ಯುಕ್ತಿಯನರಸುವ
ಪಾತಕರ ವಿಧಿಗಿನ್ನೆಂತೊ?
ಭಕ್ತರ ಮಠಕ್ಕೆ ಹೋಗಿ `ಅದು ಇದು'
ಎಂಬ ಸಂದೇಹಪಾತಕ ನೀ ಕೇಳಾ:
ಭಕ್ತರ ಮಠದೊಳಗೆ ಭಕ್ತಿರಸದ ಬೆಳಸು,
ಲಿಂಗದ ಬೆಳೆ, ಪ್ರಸಾದದ ರಾಶಿ,
ಇಂತಪ್ಪ ಪ್ರಸಾದದಲ್ಲಿಗೆ ಹೋಗಿ
ಸೂತಕವನರಸುವ ಪಾತಕರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ?
Transliteration Bhaktara maṭhavanarasikoṇḍu hōgi,
bhaktadēhika dēvanendu śrutivākyava kēḷi,
bhaktane dēvanendaridu yuktiyanarasuva
pātakara vidhiginnento?
Bhaktara maṭhakke hōgi `adu idu'
emba sandēhapātaka nī kēḷā:
Bhaktara maṭhadoḷage bhaktirasada beḷasu,
liṅgada beḷe, prasādada rāśi,
intappa prasādadallige hōgi
sūtakavanarasuva pātakara meccuvane
kūḍalacennasaṅgamadēva?