•  
  •  
  •  
  •  
Index   ವಚನ - 1618    Search  
 
ವೇದ ಶಾಸ್ತ್ರ ಪುರಾಣಾಗಮಂಗಳಲ್ಲಿ ತಾನೆ ಪ್ರಸಿದ್ಧವಾಗಿ, ಕೊಂಡಾಡಿಸಿಕೊಳ್ಳಲ್ಪಟ್ಟ ಶ್ರೀ ಮಹಾಭಸಿತವ ಧರಿಸಿದಾತನೆ ಸದ್ಬ್ರಾಹ್ಮಣ. ಇಂತಪ್ಪ ಮಹಾಭಸಿತವ ಬಿಟ್ಟು ಅಜ್ಞಾನಮತದಿಂದ ವೇದ ಶಾಸ್ತ್ರಾಗಮಪುರಾಣಂಗಳಲ್ಲಿ ವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿಟ್ಟುಕೊಂಡನಾದಡೆ, ಅವನು ಬ್ರಾಹ್ಮಣನಲ್ಲ, ಅವನು ಪಂಚಮಹಾಪಾತಕ, ಆತ ಶ್ವಪಚನೆಂದು ಪುರಾಣಪ್ರಸಿದ್ಧ. ಅದೆಂತೆಂದಡೆ, ಗರುಡಪುರಾಣದಲ್ಲಿ: "ಶ್ರುತಯಃ ಸ್ಮೃತಯಸ್ಸರ್ವೇ ಪುರಾಣಾನ್ಯಖಿಲಾನಿ ಚ ವದಂತಿ ಭೂತಿಮಹಾತ್ಮ್ಯಂ ತತಸ್ತಂ ಧಾರಯೇದ್ದ್ವಿಜಃ ತದಭಾವೇ ತದಾ ವಿಪ್ರೋ ಅಹಿತಾಗ್ನಿಂ ಸಮಾಹರೇತ್ ಭಸ್ಮನೈವ ಪ್ರಕುರ್ವೀತ ನ ಕುರ್ಯಾನ್ಮೃತ್ತಿಕಾದಿಭಿಃ ಗೋಪೀಚಂದನಧಾರೀ ತು ಶಿವಂ ಸ್ಪೃಶತಿ ಯೋ ದ್ವಿಜಃ ಶತೈಕವಿಂಶತಿಕುಲಂ ಸೋsಕ್ಷಯಂ ನರಕಂ ವ್ರಜೇತ್" ಮತ್ತಂ ಕೂರ್ಮಪುರಾಣದಲ್ಲಿ: "ತ್ರಿಪುಂಡ್ರಂ ಬ್ರಾಹ್ಮಣೋ ವಿದ್ವಾನ್ ಮನಸಾsಪಿ ಲಂಘಯೇತ್ ಶ್ರುತ್ಯಾ ವಿಧೀಯತೇ ತಸ್ಮಾತ್ತ್ಯಾಗೀ ತು ಪತಿತೋ ಭವೇತ್" ಎಂದುದಾಗಿ, ನಮ್ಮ ಕೂಡಲಚೆನ್ನಸಂಗಮದೇವರಲ್ಲಿ, ಶ್ರುತಿಸ್ಮೃತಿ ಪ್ರಸಿದ್ಧವಾದ ಶ್ರೀಮಹಾವಿಭೂತಿಯನಿಟ್ಟಾತನೆ ಸದ್ಬ್ರಾಹ್ಮಣ. ಈ ಮಹಾವಿಭೂತಿಯ ಬಿಟ್ಟು ಮಣ್ಣು ಮಸಿ ಮರದ ರಸಂಗಳ ಹಣೆಯಲ್ಲಿ ಬರೆದುಕೊಂಡನಾದಡೆ ಆವ ವಿಪ್ರನಲ್ಲ; ಆವ ಪಾಪಿ, ಶುದ್ಧ ಶ್ವಪಚ ಕಾಣಿಭೋ.
Transliteration Vēda śāstra purāṇāgamaṅgaḷalli tāne prasid'dhavāgi, koṇḍāḍisikoḷḷalpaṭṭa śrī mahābhasitava dharisidātane sadbrāhmaṇa. Intappa mahābhasitava biṭṭu ajñānamatadinda vēda śāstrāgamapurāṇaṅgaḷalli virud'dhavāda maṭṭimasigaḷa haṇeyalliṭṭukoṇḍanādaḍe, avanu brāhmaṇanalla, avanu pan̄camahāpātaka, āta śvapacanendu purāṇaprasid'dha. Adentendaḍe, garuḍapurāṇadalli: Śrutayaḥ smr̥tayas'sarvē purāṇān'yakhilāni ca vadanti bhūtimahātmyaṁ tatastaṁ dhārayēddvijaḥ tadabhāvē tadā viprō ahitāgniṁ samāharēt Bhasmanaiva prakurvīta na kuryānmr̥ttikādibhiḥ gōpīcandanadhārī tu śivaṁ spr̥śati yō dvijaḥ śataikavinśatikulaṁ sōskṣayaṁ narakaṁ vrajēt mattaṁ kūrmapurāṇadalli: Tripuṇḍraṁ brāhmaṇō vidvān manasāspi laṅghayēt śrutyā vidhīyatē tasmāttyāgī tu patitō bhavēt endudāgi, nam'ma kūḍalacennasaṅgamadēvaralli, śrutismr̥ti prasid'dhavāda śrīmahāvibhūtiyaniṭṭātane sadbrāhmaṇa. Ī mahāvibhūtiya biṭṭu maṇṇu masi marada rasaṅgaḷa haṇeyalli baredukoṇḍanādaḍe āva vipranalla; āva pāpi, śud'dha śvapaca kāṇibhō.