ಶೃಂಗಾರಾದಿ ನವರಸ ರಸಿಕನಾದಹೆನೆಂಬವ
ನವಖಂಡಮಂಡಲಾಧಾರದಲ್ಲಿ ಕರ ಚಂಡನಾಗದೆ,
ನವವಿಧ ಬಂಧನಕ್ಕೊಳಗಾಗದೆ,
ನವನಾಳದಲ್ಲಿ ಕಳಾಹೀನನಾಗದೆ,
ಇಂತೀ ನವಸಂಪಾದನೆ ಮೂವತ್ತಾರು ಪ್ರಕಾರಂಗಳು
ಪ್ರಾಣಲಿಂಗಕ್ಕೆ ಸಲುವರನರಿತು ಸಲಿಸುವದು,
ಸಲ್ಲದಿದ್ದಡೆ ತನಗಾಗಿ ಚಿಂತಿಸಲಾಗದು
ಕೂಡಲಚೆನ್ನಸಂಗಮದೇವಾ.
Transliteration Śr̥ṅgārādi navarasa rasikanādahenembava
navakhaṇḍamaṇḍalādhāradalli kara caṇḍanāgade,
navavidha bandhanakkoḷagāgade,
navanāḷadalli kaḷāhīnanāgade,
intī navasampādane mūvattāru prakāraṅgaḷu
prāṇaliṅgakke saluvaranaritu salisuvadu,
salladiddaḍe tanagāgi cintisalāgadu
kūḍalacennasaṅgamadēvā.