ಹೊನ್ನಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ,
ಹೆಣ್ಣಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ,
ಮಣ್ಣಿಂಗೆ ಕೂರ್ತು ಜಂಗಮವನ ವಿಶ್ವಾಸವ ಮಾಡುವೆ,
ಎಲೆ ಕುಚಿತ್ತಮನವೆ,
ಕುಚಿತ್ತಾಶ್ರಯದಲ್ಲಿ ಎನ್ನನಿರಿಸದಿರಾ,
ಸುಚಿತ್ತವಾಗಿ ಬಸವನೆಂದೆನಿಸಾ
ಕೂಡಲಚೆನ್ನಸಂಗಯ್ಯಾ,
ಎನ್ನ ಚಿತ್ತವು ಕಾಡಿಹುದಯ್ಯಾ.
Transliteration Honniṅge kūrtu jaṅgamavana viśvāsava māḍuve,
heṇṇiṅge kūrtu jaṅgamavana viśvāsava māḍuve,
maṇṇiṅge kūrtu jaṅgamavana viśvāsava māḍuve,
ele kucittamanave,
kucittāśrayadalli ennanirisadirā,
sucittavāgi basavanendenisā
kūḍalacennasaṅgayyā,
enna cittavu kāḍ'̔ihudayyā.