•  
  •  
  •  
  •  
Index   ವಚನ - 2    Search  
 
"ತೀರ್ಥಃ ಜಂಗಮಾನಾಂ ಲಿಂಗಪ್ರಸಾದಂ ಕ್ರೀಯತೇ | ಲಿಂಗ ಜಂಗಮಾದ್ವಯೋಭಾವ ತೀರ್ಥಂ ನಾಸ್ತಿ ಸುರಾಪಾನಂ ||" ಜಂಗಮದಲ್ಲಿ ಪಾದತೀರ್ಥವ ಪಡೆದುಕೊಂಡು ಲಿಂಗಮುಖದಲ್ಲಿ ಕೊಡಬೇಕೆಂದು ಲಿಂಗಕ್ಕೆ ಕೊಟ್ಟು ಕೊಂಬುವದು ತೀರ್ಥವಲ್ಲ ಅದು ಸುರಾಪಾನ. ಅವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ತೀರ್ಥವಿಲ್ಲ, ಪ್ರಸಾದವಿಲ್ಲ. ಅವರಿಗೆ ರೌರವ ನರಕ ತಪ್ಪದೆಂದನು, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Transliteration Tīrthaḥ jaṅgamānāṁ liṅgaprasādaṁ krīyatē | liṅga jaṅgamādvayōbhāva tīrthaṁ nāsti surāpānaṁ || jaṅgamadalli pādatīrthava paḍedukoṇḍu liṅgamukhadalli koḍabēkendu liṅgakke koṭṭu kombuvadu tīrthavalla adu surāpāna. Avarige guruvilla, liṅgavilla, jaṅgamavilla, tīrthavilla, prasādavilla. Avarige raurava naraka tappadendanu, cennayyapriya nirmāyaprabhuve.