ವೃಕ್ಷಕ್ಕೆ ಭೂಮಿ ಮುಖವೋ? ಭೂಮಿಗೆ ವೃಕ್ಷ ಮುಖವೋ?
ಶರಣಂಗೆ ಅಂಗ ಮುಖವೋ? ಲಿಂಗಕ್ಕೆ ಶರಣ ಮುಖವೋ?
ಈ ಭೇದವ ಬಲ್ಲರೆ ಹೇಳಿರಿ.
ವೃಕ್ಷಕ್ಕೆ ನೀರು ಎರೆದರೆ ಭೂಮಿಯಲ್ಲಿ ಫಲವಹುದು,
ಭೂಮಿಯಲ್ಲಿ ನೀರೆರೆದರೆ ವೃಕ್ಷಕ್ಕೆ ಫಲವಹುದು.
ಶರಣನ ಮುಖದಲ್ಲಿ ಲಿಂಗ ತೃಪ್ತಿಯಹುದು,
ಲಿಂಗದ ಮುಖದಲ್ಲಿ ಶರಣನ ತೃಪ್ತಿಯಹುದು.
ಆ ಲಿಂಗಮುಖ ಶರಣನೆಂದು ಅರಿಯದ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Transliteration Vr̥kṣakke bhūmi mukhavō? Bhūmige vr̥kṣa mukhavō?
Śaraṇaṅge aṅga mukhavō? Liṅgakke śaraṇa mukhavō?
Ī bhēdava ballare hēḷiri.
Vr̥kṣakke nīru eredare bhūmiyalli phalavahudu,
bhūmiyalli nīreredare vr̥kṣakke phalavahudu.
Śaraṇana mukhadalli liṅga tr̥ptiyahudu,
liṅgada mukhadalli śaraṇana tr̥ptiyahudu.
Ā liṅgamukha śaraṇanendu ariyada bhaṅgitarige
śivaliṅga munnavillavendāta nim'ma śaraṇa,
cennayyapriya nirmāyaprabhuve.