ಶಿವಲಿಂಗ ಸಂಸಾರಸಂಪನ್ನ ಶರಣನು
ಲಿಂಗಮುಖದಲ್ಲಿ ಭೋಗಿಸುತ್ತಿಹನು ಮುಟ್ಟಿದ ಸುಖಂಗಳನೆಲ್ಲ.
ಲಿಂಗ ಬೇರೆ ಶರಣ ಬೇರೆ ಎಂದು ನುಡಿವ
ಅಸಂಸ್ಕಾರಿ ಭೂತದೇಹಿಗಳು
ಭಕ್ತ ಜಂಗಮರೆಂದು ಮುಖವ ನೋಡಿದರೆ
ಹಂದಿಯ ಜನ್ಮ ತಪ್ಪದೆಂದು ಶ್ರುತಿ ಸಾರುತಿದೆ:
'ಪ್ರೇತಲಿಂಗ ಸಂಸ್ಕಾರಿಣಾಂ ಭೂತಪ್ರಾಣಿ ನಜಾಯತೇ |
ಪ್ರಭುತೇ ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ||'
ಇಂತು ಪ್ರೇತಲಿಂಗ ಸವಳು ಭುಂಜಿಸುವುದಲ್ಲದೆ
ದ್ವಯವಲ್ಲದೆ ಪ್ರಸಾದವಲ್ಲವೆಂದ
ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Transliteration Śivaliṅga sansārasampanna śaraṇanu
liṅgamukhadalli bhōgisuttihanu muṭṭida sukhaṅgaḷanella.
Liṅga bēre śaraṇa bēre endu nuḍiva
asanskāri bhūtadēhigaḷu
bhakta jaṅgamarendu mukhava nōḍidare
handiya janma tappadendu śruti sārutide:
'Prētaliṅga sanskāriṇāṁ bhūtaprāṇi najāyatē |
prabhutē mukhaṁ dr̥ṣṭvā kōṭijanmani sūkaraḥ||'
intu prētaliṅga savaḷu bhun̄jisuvudallade
dvayavallade prasādavallavenda
nim'ma śaraṇa cennayyapriya nirmāyaprabhuve.