ಅರ್ಚಿಸಿ ಪೂಜಿಸುವುದಕ್ಕೆ ಅಂಗವಾಗಿ,
ಮನ ನೆನೆವುದಕ್ಕೆ ಘನತರವಾಗಿ,
ಪೂಜಿಸುವುದಕ್ಕೆ ಪುಣ್ಯಮೂರ್ತಿಯಾಗಿ,
ಭಾವ ನೆನೆವುದಕ್ಕೆ ಭವಗೇಡಿಯಾಗಿ,
ಉಭಯದಂಗವ ತಾಳಿ ನಿಂದ
ಕಾಲಾಂತಕ ಭೀಮೇಶ್ವರ ಲಿಂಗವು ತಾನೆ.
Transliteration Arcisi pūjisuvudakke aṅgavāgi,
mana nenevudakke ghanataravāgi,
pūjisuvudakke puṇyamūrtiyāgi,
bhāva nenevudakke bhavagēḍiyāgi,
ubhayadaṅgava tāḷi ninda
kālāntaka bhīmēśvara liṅgavu tāne.