•  
  •  
  •  
  •  
Index   ವಚನ - 39    Search  
 
ತರುವಾಗಿ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ? ತನುವೆಂಬುದ ಹೊತ್ತು ಲಿಂಗವ ಪೂಜಿಸದಿರಬಹುದೆ? ಅಂಗವಿಲ್ಲದ ಸಂಗವಂಟೆ? ಸಂಗವಿಲ್ಲದ ಸುಖವುಂಟೆ? ಸುಖವಿಲ್ಲದ ಕಳೆ ರಸವುಂಟೆ? ಇಂತೀ ಅಂಗದಲ್ಲಿದ್ದಂತೆ ಲಿಂಗವನರಿದು, ಲಿಂಗದಲ್ಲಿದಂತೆ ಸಕಲ ಪ್ರಪಂಚಿಕವ ಮುರಿದು ನಿಂದಲ್ಲಿ ಕಾಲಾಂತಕ ಭೀಮೇಶ್ವರಲಿಂಗವು ತಾನೆ.
Transliteration Taruvāgi huṭṭi vāyuvige eḍegoḍadirabahude? Tanuvembuda hottu liṅgava pūjisadirabahude? Aṅgavillada saṅgavaṇṭe? Saṅgavillada sukhavuṇṭe? Sukhavillada kaḷe rasavuṇṭe? Intī aṅgadalliddante liṅgavanaridu, liṅgadallidante sakala prapan̄cikava muridu nindalli kālāntaka bhīmēśvaraliṅgavu tāne.